ಅಗಾಧ ಪರಿಣಾಮವನ್ನು ಉಂಟುಮಾಡುವ ಮೋಜಿನ ಮತ್ತು ಸುಲಭವಾದ ಪ್ರಶ್ನೆಗಳಿಗೆ ಉತ್ತರಿಸಿ! ಹಂತಗಳನ್ನು ಯಶಸ್ವಿಯಾಗಿ ದಾಟುತ್ತಾ ಹೋಗಿ, ಬ್ಯಾಡ್ಜ್‌ಗಳನ್ನು ಅನ್‌ಲಾಕ್ ಮಾಡಿ, ಹಾಗೆಯೇ ನಿಮ್ಮ ಸಾಧನೆಗಳನ್ನು ಹಂಚಿಕೊಳ್ಳಿ! ನಿಮ್ಮ ಸ್ವಯಂಪ್ರೇರಿತ ಕೊಡುಗೆಗಳು ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ Google ಉತ್ಪನ್ನಗಳನ್ನು ಇನ್ನಷ್ಟು ಉತ್ತಮಗೊಳಿಸುತ್ತವೆ. ಉತ್ತಮವಾಗಿ ಅರ್ಥಮಾಡಿಕೊಳ್ಳಲು Google Assistant ಗೆ ತರಬೇತಿ ನೀಡಿ, ನಿಮ್ಮ ಭಾಷೆಯ ಅನುವಾದವನ್ನು ಉತ್ತಮಗೊಳಿಸಲು Google Translate ಅನ್ನು ಸುಧಾರಿಸಿ ಹಾಗೂ ವಸ್ತುಗಳನ್ನು ಗುರುತಿಸಲು Google Photos ಗೆ ಸಹಾಯ ಮಾಡಿ. ಇವುಗಳು, ಸ್ಥಳೀಯವಾಗಿ ಮತ್ತು ಜಾಗತಿಕವಾಗಿ Google ಅನ್ನು ಸುಧಾರಿಸಲು ನೀವು ಮಾಡಬಹುದಾದ ಕೆಲವು ನಿರಂತರವಾಗಿ ಬೆಳೆಯುತ್ತಿರುವ ಮತ್ತು ವೈವಿಧ್ಯಮಯ ಕೊಡುಗೆಗಳಾಗಿವೆ.
Google ನ ಕೊಡುಗೆದಾರರ ಸಮುದಾಯಕ್ಕೆ ಸೇರಿಕೊಳ್ಳಲು ಈ ಕೆಲವು ಕಾರ್ಯಗಳನ್ನು ಮಾಡಿ ನೋಡಿ:
ಸಾಂಸ್ಕೃತಿಕ ಚಿತ್ರದ ಪರಿಶೀಲನೆ: ಸರಳವಾದ ಹೌದು/ಇಲ್ಲ ಎಂಬ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಚಿತ್ರಗಳ ಸಾಂಸ್ಕೃತಿಕ ನಿಖರತೆಯನ್ನು ಪರಿಶೀಲಿಸಿ.
ಪ್ರಶ್ನೆಯನ್ನು ಅರ್ಥಮಾಡಿಕೊಳ್ಳುವುದು: ನೀಡಿರುವ ಪ್ರಶ್ನೆಯನ್ನು ನೀವು ಎಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು ಎಂಬುದನ್ನು ಆಯ್ಕೆಮಾಡಿ.
ಚಿತ್ರದ ಹೋಲಿಕೆ: ನಿಮಗೆ ಯಾವ ಚಿತ್ರ ಹೆಚ್ಚು ಇಷ್ಟವಾಯಿತು ಎಂದು ನಮಗೆ ತಿಳಿಸಿ.
ಕೈಬರಹದ ಮೌಲ್ಯಮಾಪನ: ನಿಮಗೆ ಕಾಣಿಸುವ ಪಠ್ಯಕ್ಕೆ ಕೈಬರಹವು ಹೊಂದಿಕೆಯಾಗುತ್ತದೆಯೇ ಎಂಬುದನ್ನು ನಮಗೆ ತಿಳಿಸಿ.
ಕೈಬರಹವನ್ನು ಓದುವುದು: ಕೈಬರಹದ ಮೂಲಕ ಬರೆದಿರುವ ಪಠ್ಯವನ್ನು ಗುರುತಿಸುವುದಕ್ಕೆ ನಿಮಗೆ ಸಾಧ್ಯವಾಗುತ್ತದೆಯೇ ಎಂಬುದನ್ನು ನಮಗೆ ತಿಳಿಸಿ.
ಕೈಬರಹದ ಹೋಲಿಕೆ: ಕೈಬರಹದ ಎರಡು ಶೈಲಿಗಳನ್ನು ಹೋಲಿಕೆ ಮಾಡಿ ಹಾಗೂ ನಿಮ್ಮ ಆದ್ಯತೆಯ ಶೈಲಿಯನ್ನು ಆಯ್ಕೆಮಾಡಿ.
ಪಾಯಿಂಟ್ ಪರಿಶೀಲನೆ: ಚಿತ್ರದ ಕೇಂದ್ರ ಬಿಂದು ವಿಷಯದ ಮೇಲೆ ಇದೆಯೇ ಎಂಬುದನ್ನು ಪರಿಶೀಲಿಸಿ.
ಆಹಾರದ ಹೋಲಿಕೆ: ಆಹಾರದ ಎರಡು ಚಿತ್ರಗಳ ಗುಣಲಕ್ಷಣಗಳನ್ನು ಹೋಲಿಸಿ ನೋಡಿ.
ಆಡಿಯೋ ಕೊಡುಗೆ: ಧ್ವನಿ ತಂತ್ರಜ್ಞಾನವನ್ನು ಸುಧಾರಿಸಲು ನಿಮ್ಮ ಧ್ವನಿಯನ್ನು ರೆಕಾರ್ಡ್ ಮಾಡಿ.
ಆಹಾರದ ಕುರಿತಾದ ವಾಸ್ತವಾಂಶಗಳು: ಒಂದು ಖಾದ್ಯಕ್ಕೆ ನಿರ್ದಿಷ್ಟ ಗುಣಲಕ್ಷಣಗಳಿದ್ದರೆ ಅದನ್ನು ನಮಗೆ ತಿಳಿಸಿ.
ಆಹಾರದ ಕುರಿತು ಲೇಬಲ್ ಮಾಡುವವರು: ಚಿತ್ರದಲ್ಲಿ ಯಾವ ತಿನಿಸನ್ನು ತೋರಿಸಲಾಗಿದೆ ಎಂಬುದನ್ನು ನಮಗೆ ತಿಳಿಸಿ.
ಶಬ್ದಾರ್ಥ ಸಾಮ್ಯತೆ: ಎರಡು ನುಡಿಗಟ್ಟುಗಳು ಒಂದೇ ಅರ್ಥವನ್ನು ಹೊಂದಿದೆಯೇ ಎಂಬುದನ್ನು ನಿರ್ಧರಿಸಿ.
ಚಾರ್ಟ್ ಅನ್ನು ಅರ್ಥಮಾಡಿಕೊಳ್ಳುವುದು: ಚಾರ್ಟ್‌ಗಳು ಅರ್ಥವಾಗುವ ರೀತಿಯಲ್ಲಿವೆಯೇ ಹಾಗೂ ವಿಶ್ವಾಸಾರ್ಹವಾಗಿವೆಯೇ ಎಂಬುದನ್ನು ನಿರ್ಧರಿಸಿ.
ಗ್ಲೈಡ್ ಟೈಪ್: ನಿಮಗೆ ಕಾಣಿಸುವ ಪಠ್ಯವನ್ನು ಟೈಪ್ ಮಾಡಲು ಕೀಬೋರ್ಡ್ ಮೇಲೆ ನಿಮ್ಮ ಬೆರಳುಗಳನ್ನು ಗ್ಲೈಡ್ ಮಾಡಿ.
ಆಡಿಯೋ ಮೌಲ್ಯಮಾಪನ: ಚಿಕ್ಕ ಆಡಿಯೋ ಕ್ಲಿಪ್ ಅನ್ನು ಆಲಿಸಿ ಮತ್ತು ಅದರಲ್ಲಿ ನಿಮ್ಮ ಭಾಷೆಯ ಉಚ್ಚಾರಣೆ ಸಹಜವಾಗಿ ಕೇಳಿಸುತ್ತಿದೆಯೇ ಎಂಬುದನ್ನು ನಿರ್ಧರಿಸಿ.
ಚಿತ್ರದ ಕುರಿತು ವಿವರಣೆ: ಧ್ವನಿ ತಂತ್ರಜ್ಞಾನವನ್ನು ಸುಧಾರಿಸಲು ನಿಮಗೆ ಪ್ರಸ್ತುತಪಡಿಸುವ ಚಿತ್ರಗಳ ವಿವರಣೆಯನ್ನು ನಿಮ್ಮ ಧ್ವನಿಯಲ್ಲಿ ರೆಕಾರ್ಡ್ ಮಾಡಿ.
ಚಿತ್ರದ ಲೇಬಲ್‌ನ ಪರಿಶೀಲನೆ: ಚಿತ್ರಗಳನ್ನು ಸರಿಯಾಗಿ ಟ್ಯಾಗ್ ಮಾಡಲಾಗಿದೆಯೇ ಎಂಬುದನ್ನು ನಮಗೆ ತಿಳಿಸಿ.
ಇಮೇಜ್ ಕ್ಯಾಪ್ಚರ್: ನಿಮ್ಮ ಸುತ್ತಮುತ್ತಲಿನ ಸಂಗತಿಗಳ ಫೋಟೋಗಳನ್ನು ತೆಗೆದುಕೊಳ್ಳಿ ಮತ್ತು ಅವುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
ಅನುವಾದ: ನುಡಿಗಟ್ಟುಗಳು ಹಾಗೂ ಪದಗಳನ್ನು ವಿವಿಧ ಭಾಷೆಗಳಿಗೆ ಅನುವಾದಿಸಿ.
ಅನುವಾದದ ಮೌಲ್ಯಮಾಪನ: ಸರಿಯಾಗಿ ಅನುವಾದಿಸಲಾಗಿರುವ ನುಡಿಗಟ್ಟುಗಳನ್ನು ಆಯ್ಕೆಮಾಡಿ.
ಕೈಬರಹ ಗುರುತಿಸುವಿಕೆ: ಕೈಬರಹವನ್ನು ನೋಡಿ ಮತ್ತು ನಿಮಗೆ ಕಾಣಿಸುವ ಪಠ್ಯವನ್ನು ಟೈಪ್ ಮಾಡಿ.
ಭಾವನೆಯ ಮೌಲ್ಯಮಾಪನ: ನಿಮ್ಮ ಭಾಷೆಯ ಒಂದು ವಾಕ್ಯ ಸಕಾರಾತ್ಮಕವಾಗಿದೆಯೇ, ನಕಾರಾತ್ಮಕವಾಗಿದೆಯೇ ಅಥವಾ ತಟಸ್ಥವಾಗಿದೆಯೇ ಎಂಬುದನ್ನು ನಿರ್ಧರಿಸಿ.
ಸ್ಮಾರ್ಟ್ ಕ್ಯಾಮರಾ (Android Lollipop 5.0+ ಅಗತ್ಯವಿದೆ): ಕ್ಯಾಮರಾವನ್ನು ಒಂದು ವಸ್ತುವಿನೆದುರು ಹಿಡಿಯಿರಿ ಮತ್ತು ಆ ವಸ್ತು ಏನೆಂದು ಊಹಿಸಲು ಅದಕ್ಕೆ ಸಾಧ್ಯವಾಗುತ್ತದೆಯೇ ಎಂದು ನೋಡಿ.
ನೀವು ಪ್ರತಿ ಬಾರಿ ಉತ್ತರವನ್ನು ಸಲ್ಲಿಸಿದಾಗ, ಮುಂಬರುವ ವರ್ಷಗಳಲ್ಲಿ Google ಉತ್ಪನ್ನಗಳು ಹೆಚ್ಚು ಒಳಗೊಳ್ಳುವ ಹಾಗೆ ನೀವು ಮಾಡುತ್ತೀರಿ. ನೀವು ಮಾಡುವ ಸಹಾಯಕ್ಕೆ ಪ್ರತಿಯಾಗಿ ಪರ್ಕ್‌ಗಳನ್ನು ನೀಡಿ ನಿಮ್ಮನ್ನು ಪುರಸ್ಕರಿಸಲಾಗುತ್ತದೆ, ಉದಾಹರಣೆಗೆ, ಸ್ಥಳೀಯ ಭೇಟಿಗಳಲ್ಲಿ ಇತರ ಕೊಡುಗೆದಾರರೊಂದಿಗೆ ಸಂಪರ್ಕ ಸಾಧಿಸುವುದು, ಗೂಗ್ಲರ್‌ಗಳು ಮತ್ತು ಇತರ ಕೊಡುಗೆದಾರ ಜೊತೆಗಿನ ಆನ್‌ಲೈನ್ Hangouts ನಲ್ಲಿ ಭಾಗವಹಿಸಲು ವಿಶೇಷ ಆಹ್ವಾನಗಳನ್ನು ಸ್ವೀಕರಿಸುವುದು ಮತ್ತು Crowdsource ನ ಸಾಮಾಜಿಕ ಚಾನಲ್‌ಗಳಲ್ಲಿ ಕಾಣಿಸಿಕೊಳ್ಳುವುದು. ನೀವು ರೈಲಿನಲ್ಲಿ ಪ್ರಯಾಣ ಮಾಡುತ್ತಿರಿ, ಬಸ್ ನಿಲ್ದಾಣದಲ್ಲಿರಿ ಅಥವಾ ಸರದಿ ಸಾಲಿನಲ್ಲಿ ಕಾಯುತ್ತಿರಿ, ಸ್ವಲ್ಪ ಸಮಯ ತೆಗೆದುಕೊಂಡು ನಿಮ್ಮ ಸ್ಥಳೀಯ ಸಮುದಾಯಕ್ಕಾಗಿ Google ಅನ್ನು ಉತ್ತಮಗೊಳಿಸಲು ಸಹಾಯ ಮಾಡಿ.
ಅಪ್‌ಡೇಟ್ ದಿನಾಂಕ
ಮೇ 19, 2025